ಯುಜಿ ಕೆಸಿಇಟಿ ಫಲಿತಾಂಶ
ಗುರುವಾಯನಕೆರೆ: ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಗುರುವಾಯನಕೆರೆಯ ಎಕ್ಸೆಲ್ ಕಾಲೇಜು, ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶದಲ್ಲಿ ಮತ್ತೊಮ್ಮೆ ಭರ್ಜರಿ ಸಾಧನೆ ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿದೆ.
ರಾಷ್ಟ್ರಮಟ್ಟದ ಜೆಇಇ (JEE) ಪರೀಕ್ಷೆ, ಪಿಯು ಬೋರ್ಡ್ ಪರೀಕ್ಷೆ ಹಾಗೂ ಬಿ.ಎಸ್ಸಿ ಅಗ್ರಿ ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಯಾಂಕ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದ ಎಕ್ಸೆಲ್ ವಿದ್ಯಾರ್ಥಿಗಳು, ಇದೀಗ ಸಿಇಟಿ ಫಲಿತಾಂಶದಲ್ಲೂ ತಮ್ಮ ಅಪ್ರತಿಮ ಸಾಧನೆಯನ್ನು ಮುಂದುವರಿಸಿದ್ದಾರೆ. ಈ ಬಾರಿಯ ಸಿಇಟಿ ಫಲಿತಾಂಶದಲ್ಲಿ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ಅಗ್ರಸ್ಥಾನಗಳನ್ನು ಕಬಳಿಸಿದ್ದಾರೆ. ಮೊದಲ 100 ರ್ಯಾಂಕ್ ಗಳ ಪೈಕಿ ಬರೋಬ್ಬರಿ 31 ರ್ಯಾಂಕ್ಗಳನ್ನು ಎಕ್ಸೆಲ್ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.